ಕರ್ನಾಟಕ ಮೆಡಿಕಲ್ ಶಾಪ್ ಬಂದ್
ಸ್ನೇಹಿತರೆ, ನಮ್ಮ support.ddtimelearn.com ವೆಬ್‌ಸೈಟ್‌ಗೆ ಸ್ವಾಗತ. ರಾಜ್ಯದ ಜನರಿಗೆ ಮತ್ತೊಂದು ಪ್ರಮುಖ ಹಾಗೂ ತುರ್ತು ಸುದ್ದಿ ಇಂದಿನಿಂದ ಹೊರಬಿದ್ದಿದೆ. ಕರ್ನಾಟಕದ ಪ್ರತಿಯೊಬ್ಬ ನಾಗರಿಕರೂ ತಿಳಿದುಕೊಳ್ಳಬೇಕಾದ ಒಂದು ಅತ್ಯಂತ ಪ್ರಮುಖವಾದ ಮಾಹಿತಿ ಇಲ್ಲಿದೆ. ನೀವು ನಿಯಮಿತವಾಗಿ ಬಳಸುವ ಬಿಪಿ, ಶುಗರ್ ಅಥವಾ ಯಾವುದೇ ತುರ್ತು ಆರೋಗ್ಯದ ಔಷಧಿಗಳು ಇದ್ದರೆ ಇಂದೇ ಖರೀದಿಸಿ ಇಟ್ಟುಕೊಳ್ಳಿ. ಯಾಕಂದ್ರೆ ನಾಳೆ ಮೇ 20 ರಂದು ಇಡೀ ಕರ್ನಾಟಕದಾದ್ಯಂತ ಎಲ್ಲಾ ಖಾಸಗಿ ಮೆಡಿಕಲ್ ಶಾಪ್‌ಗಳು ಸಂಪೂರ್ಣವಾಗಿ ಬಂದ್ ಆಗಲಿವೆ. ಆದ್ದರಿಂದ ನಿಮಗೆ ಅಗತ್ಯವಾಗಿರುವ ಟ್ಯಾಬ್ಲೆಟ್ಸ್ ಮತ್ತು ಮೆಡಿಸನ್ ಗಳಿಗಾಗಿ ಇಂದೇ ನಿಮ್ಮ ಹತ್ತಿರದ ಮೆಡಿಕಲ್ ಶಾಪ್ ಗಳಿಗೆ ಭೇಟಿ ನೀಡಿ ತಂದುಕೊಳ್ಳುವುದು ಉತ್ತಮ.ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟು ಮೆಡಿಕಲ್ ಶಾಪ್‌ಗಳ ಮಾಲೀಕರು ಈ ಬಂದ್ ಹಮ್ಮಿಕೊಂಡಿದ್ದಾರೆ. ಇದರಿಂದಾಗಿ ರೋಗಿಗಳಿಗೆ ಭಾರಿ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಗಳು ಮತ್ತು ಆಸ್ಪತ್ರೆಗಳ ಒಳಗಿರುವ ಸರ್ಕಾರಿ ಮೆಡಿಕಲ್ಸ್ ಓಪನ್ ಇರುತ್ತವೆ. ಪ್ರತ್ಯೇಕವಾಗಿ ಸ್ವತಂತ್ರವಾಗಿರತಕ್ಕಂತ (Independent) ಖಾಸಗಿ ಮೆಡಿಕಲ್ ಶಾಪ್‌ಗಳು ಮಾತ್ರ ಕ್ಲೋಸ್ ಆಗುತ್ತಿವೆ.ಮೆಡಿಕಲ್ ಶಾಪ್ ಬಂದ್‌ಗೆ ಮುಖ್ಯ ಕಾರಣವೇನು?
ರಾಜ್ಯಾದ್ಯಂತ ಮೆಡಿಕಲ್ ಶಾಪ್‌ಗಳನ್ನು ಕ್ಲೋಸ್ ಮಾಡುತ್ತಿರುವುದಕ್ಕೆ ಮತ್ತು ಅವರ ಬೇಡಿಕೆಗಳಿಗೆ ಮುಖ್ಯ ಕಾರಣ ಆನ್‌ಲೈನ್ ಇ-ಫಾರ್ಮಸಿಗಳು. ಹೌದು, ಆನ್‌ಲೈನ್‌ನಲ್ಲಿ ಔಷಧಿ ಮಾರಾಟ ಮಾಡುವಂತದ್ದು ಸಂಪೂರ್ಣವಾಗಿ ನಿಲ್ಲಬೇಕು ಎಂದು ಆಗ್ರಹಿಸಿ ಈ ಒಂದು ದಿನದ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಪ್ರಸ್ತುತ ಬ್ಲಿಂಕಿಟ್ (Blinkit), ಸ್ವಿಗ್ಗಿ (Swiggy), ಮತ್ತು ಝೊಮ್ಯಾಟೊ (Zomato) ದಂತಹ ಆನ್‌ಲೈನ್ ಡೆಲಿವರಿ ಆಪ್‌ಗಳಲ್ಲಿ ಔಷಧಿಗಳನ್ನು ಸಂಗ್ರಹ ಮಾಡಿಟ್ಟುಕೊಂಡು ಗ್ರಾಹಕರ ಮನೆಗೆ ತಲುಪಿಸಲಾಗುತ್ತಿದೆ. ಇದು ರೋಗಿಗಳ ಜೀವನದ ಮೇಲೆ ಭಾರಿ ಅಪಾಯವನ್ನು ಉಂಟುಮಾಡುತ್ತದೆ ಎನ್ನುವುದು ಮೆಡಿಕಲ್ ವ್ಯಾಪಾರಿಗಳ ಆಕ್ರೋಶವಾಗಿದೆ. ಇದರ ಜೊತೆಗೆ, ನಿರಂತರವಾಗಿ ಮೆಡಿಕಲ್ ಶಾಪ್‌ಗಳ ವ್ಯಾಪಾರಿಗಳ ಬಿಸಿನೆಸ್‌ಗೆ ಇದರಿಂದ ದೊಡ್ಡ ಹೊಡೆತ ಬೀಳುತ್ತಿದೆ.
## ಆನ್‌ಲೈನ್ ಮೆಡಿಸನ್ ಮಾರಾಟದಿಂದ ವ್ಯಾಪಾರಸ್ಥರಿಗೆ ತೊಂದರೆ
ಈಗಿನ ದಿನಗಳಲ್ಲಿ ಜನರು ಮೆಡಿಕಲ್ ಶಾಪ್ ಗಳಿಗೆ ಬಂದು ಔಷಧಿಗಳನ್ನು ತೆಗೆದುಕೊಳ್ಳುವ ಬದಲು, ಆನ್‌ಲೈನ್‌ನಲ್ಲೇ ಮೆಡಿಸನ್ ಲಿಂಕ್‌ಗಳನ್ನು ಬುಕ್ ಮಾಡಿ ತರಿಸಿಕೊಳ್ಳುತ್ತಿದ್ದಾರೆ. ಗ್ರಾಹಕರು ಆನ್‌ಲೈನ್ ಆಪ್‌ಗಳ ಮೇಲೆ ಅವಲಂಬಿತವಾಗುತ್ತಿರುವುದರಿಂದ ಸಾಂಪ್ರದಾಯಿಕ ಮೆಡಿಕಲ್ ಶಾಪ್‌ಗಳ ಇನ್ಕಮ್ (ಆದಾಯ) ಗಣನೀಯವಾಗಿ ಕಡಿಮೆಯಾಗಿದೆ. ಆನ್‌ಲೈನ್ ಶಾಪಿಂಗ್ ಹಾವಳಿ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಸಾಮಾನ್ಯ ಮೆಡಿಕಲ್ ಶಾಪ್ ಬ್ಯುಸಿನೆಸ್ ನಡೆಸುವುದು ತುಂಬಾ ಕಷ್ಟಕರವಾಗುತ್ತದೆ ಎಂದು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೆ ಆನ್‌ಲೈನ್ ಮಾರಾಟ:
ದೊಡ್ಡ ಅಪಾಯ!ಈ ಮುಷ್ಕರಕ್ಕೆ ಮತ್ತೊಂದು ಮುಖ್ಯ ಕಾರಣವೆಂದರೆ ಸುರಕ್ಷತೆ. ಪ್ರಸ್ತುತ ಆನ್‌ಲೈನ್ ಆಪ್‌ಗಳಲ್ಲಿ ಯಾವುದೇ ಡಾಕ್ಟರ್ ಪ್ರೆಸ್ಕ್ರಿಪ್ಷನ್ (Doctor’s Prescription) ಇಲ್ಲದೆಯೇ ಅನೇಕ ರೀತಿಯ ಮೆಡಿಸನ್‌ಗಳನ್ನು ಸುಲಭವಾಗಿ ಖರೀದಿ ಮಾಡಲು ಅವಕಾಶ ಸಿಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಈ ರೀತಿಯ ಕಾನೂನುಬಾಹಿರ ಆನ್‌ಲೈನ್ ಮಾರಾಟಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಅನ್ನೋ ಮುಖ್ಯ ದೃಷ್ಟಿಕೋನವನ್ನು ಇಟ್ಟುಕೊಂಡು ಈ ಹೋರಾಟವನ್ನು ಮಾಡಲಾಗುತ್ತಿದೆ. ಆನ್‌ಲೈನ್ ಮಾರಾಟವು ಗ್ರಾಹಕರಿಗೆ ಒಂದು ಕಡೆ ಸುಲಭ ಹಾಗೂ ಒಳ್ಳೆಯದಾಗಿ ಕಾಣಿಸಿದರೂ, ಮೆಡಿಕಲ್ ವ್ಯಾಪಾರಿಗಳಿಗೆ ಮತ್ತು ಆರೋಗ್ಯದ ಸುರಕ್ಷತೆಗೆ ಇದರಿಂದ ಯಾವುದೇ ಅನುಕೂಲ ಆಗುತ್ತಿಲ್ಲ ಎಂಬ ಬಲವಾದ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿ 3,000 ಮೆಡಿಕಲ್ಸ್ ಕ್ಲೋಸ್:
ಬಂದ್ ಸಕ್ಸಸ್ ಆಗುತ್ತಾ?ಈ ಬೃಹತ್ ಪ್ರತಿಭಟನೆಯ ಭಾಗವಾಗಿ ರಾಜಧಾನಿ ಬೆಂಗಳೂರು ಒಂದರಲ್ಲೇ ಸುಮಾರು 3,000 ಕ್ಕೂ ಹೆಚ್ಚು ಖಾಸಗಿ ಮೆಡಿಕಲ್ ಶಾಪ್‌ಗಳು ಸಂಪೂರ್ಣವಾಗಿ ಕ್ಲೋಸ್ ಆಗಲಿವೆ. ಇಡೀ ರಾಜ್ಯಾದ್ಯಂತ ನೋಡಿದರೆ ಸುಮಾರು 26,000ಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಂದ್ ಆಗುತ್ತಿರುವುದರಿಂದ ಗ್ರಾಹಕರಿಗೆ ಅಗತ್ಯ ಮೆಡಿಸನ್ ಸಿಗುವುದು ನಾಳೆ ಸ್ವಲ್ಪ ಡೌಟೇ ಎನ್ನಬಹುದು. ಈಗಾಗಲೇ ಇಂದು ಬೆಳಿಗ್ಗೆ ಕೆಲವು ಮೆಡಿಕಲ್ಸ್ ಓಪನ್ ಇದ್ದರೆ, ಇನ್ನು ಕೆಲವು ಕಡೆ ಇಂದಿನಿಂದಲೇ ಬಂದ್ ಪ್ರಕ್ರಿಯೆ ಆರಂಭವಾಗಿದೆ. ಈ ಹೋರಾಟಕ್ಕೆ ಒಂದಷ್ಟು ಫಾರ್ಮಸಿ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಿದ್ದರೆ, ಇನ್ನು ಕೆಲವು ಸಂಘಟನೆಗಳು ದೂರ ಉಳಿದಿವೆ. ಈ ಮೆಡಿಕಲ್ ಶಾಪ್ ಬಂದ್ ವಿಚಾರ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೆ ಹಾಗೂ ಸರ್ಕಾರ ಇದಕ್ಕೆ ಹೇಗೆ ಸ್ಪಂದಿಸುತ್ತೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.ಇದೇ ರೀತಿಯ ಕರ್ನಾಟಕದ ಎಲ್ಲಾ ಇತ್ತೀಚಿನ ತಾಜಾ ಸುದ್ದಿಗಳು, ಉದ್ಯೋಗ ಮಾಹಿತಿ ಮತ್ತು ಸರ್ಕಾರಿ ಯೋಜನೆಗಳ ಅಪ್‌ಡೇಟ್‌ಗಳಿಗಾಗಿ support.ddtimelearn.com ವೆಬ್‌ಸೈಟ್‌ಗೆ ಪ್ರತಿದಿನ ಭೇಟಿ ನೀಡಿ. ಧನ್ಯವಾದಗಳು!–